Machinery: ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ! ರೈತರಿಗೆ ದೊಡ್ಡ ಅವಕಾಶ!

ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ! ರೈತರಿಗೆ ದೊಡ್ಡ ಅವಕಾಶ!

2025-26ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಕೃಷಿ ಉತ್ಪನ್ನ ಸಂಸ್ಕರಣಾ ಯೋಜನೆಯಡಿ ರೈತರಿಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಶೇ.50 ರ ಸಹಾಯಧನದೊಂದಿಗೆ (ಸಬ್ಸಿಡಿ) ಲಭ್ಯವಾಗುವ ಅವಕಾಶವನ್ನು ಸರ್ಕಾರ ಒದಗಿಸಿದೆ.

ರಿಯಾಯಿತಿಯಲ್ಲಿ ಲಭ್ಯವಿರುವ ಪ್ರಮುಖ ಕೃಷಿ ಯಂತ್ರೋಪಕರಣಗಳು:

WhatsApp Group Join Now
Telegram Group Join Now
  • ಪವರ್ ಟಿಲ್ಲರ್
  • ಕಲ್ಟಿವೇಟರ್
  • ರೋಟವೇಟರ್
  • ಎಂಪ್ಲೂ, ಡಿಸ್ಕ್ ಪ್ಲೋ
  • ಕಳೆಕೊಚ್ಚುವ ಯಂತ್ರ
  • ಡಿಸೇಲ್ ಪಂಪ್ ಸೆಟ್
  • ಪವರ್ ಸ್ಪ್ರೇಯರ್
  • ಮೇವು ಕತ್ತರಿಸುವ ಯಂತ್ರ
  • ಭತ್ತದ ಒಕ್ಕಣೆ ಯಂತ್ರ
  • ಜೋಳ ಒಕ್ಕಣೆ ಯಂತ್ರ
  • ಭತ್ತ ಕಟಾವು ಯಂತ್ರ
  • ರಾಗಿ ಕ್ಲೀನಿಂಗ್ ಯಂತ್ರ
  • ಹಿಟ್ಟು ಮಾಡುವ ಯಂತ್ರ
  • ಮೆಣಸಿನಕಾಯಿ ಪುಡಿ ಯಂತ್ರ
  • ಎಣ್ಣೆ ಗಾಣಗಳು ಮತ್ತು ಇನ್ನಿತರ ಸಂಸ್ಕರಣೆ ಉಪಕರಣಗಳು

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

  • ಪಹಣಿ (RTC) ನಕಲು
  • ಆಧಾರ್ ಕಾರ್ಡ್ ಜೆರಾಕ್ಸ್
  • ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್
  • 1 ಭಾವಚಿತ್ರ
  • ₹100 ಛಾಪಾಕಾಗದ ದಾಖಲೆ

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ (Raitha Samparka Kendra) ಭೇಟಿ ನೀಡಿ, ಉಚಿತ ಅರ್ಜಿ ಪಡೆಯಬಹುದು. ಅರ್ಜಿಯೊಂದಿಗೆ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸಿ, ಇಲಾಖೆಯಿಂದ ಕೃಷಿ ಯಂತ್ರೋಪಕರಣಗಳ ಸಬ್ಸಿಡಿ ಪಡೆಯಬಹುದು.

ಈ ಯೋಜನೆಯಿಂದ ರೈತರು ತಂತ್ರಜ್ಞಾನಾಧಾರಿತ ಕೃಷಿಗೆ ಮುಂದಾಗಬಹುದು ಮತ್ತು ಕೆಲಸದ ಹೊರೆ ಕಡಿಮೆ ಮಾಡಿಕೊಂಡು ಹೆಚ್ಚು ಫಲಿತಾಂಶ ಗಳಿಸಬಹುದು.

ಸೂಚನೆ: ಪ್ರತಿ ಯಂತ್ರಕ್ಕೆ ಸಬ್ಸಿಡಿಯ ಪ್ರಮಾಣ, ಲಭ್ಯತೆ ಮತ್ತು ಆಯ್ಕೆ ಪ್ರಕ್ರಿಯೆ ಜಿಲ್ಲೆಯ ಕೃಷಿ ಇಲಾಖೆಯ ಸೂಚನೆಯ ಪ್ರಕಾರ ಬದಲಾಗಬಹುದು.

WhatsApp Group Join Now
Telegram Group Join Now

और पढ़ें

Leave a Comment