ಕ್ರೆಡಿಟ್ ಸ್ಕೋರ್ ಕಡಿಮೆ ಇದೆ ಎಂದು ನಿಮಗೆ ಸಾಲ ಸಿಗುತ್ತಿಲ್ಲವೇ? ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೆ ಲೋನ್ ಸಿಗುವುದಿಲ್ಲವೇ? ಈ ಸರಳ ಟಿಪ್ಸ್ ಅನುಸರಿಸಿ!

ಬಹಳಷ್ಟು ಜನರು ಪರ್ಸನಲ್ ಲೋನ್‌ಗಾಗಿ ಅರ್ಜಿ ಹಾಕಿದಾಗ ಬಡ್ಡಿದರ ಜಾಸ್ತಿ ಅಥವಾ ನೇರ ನಿರಾಕರಣೆ ಎದುರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣವೊಂದು – ಕಡಿಮೆ ಸಿಬಿಲ್ ಸ್ಕೋರ್ (CIBIL Score).

WhatsApp Group Join Now
Telegram Group Join Now

ಸಿಬಿಲ್ ಸ್ಕೋರ್ ಎಂದರೇನು?

ಸಿಬಿಲ್ ಸ್ಕೋರ್ ಒಂದು 3 ಅಂಕಿಯ ಸಂಖ್ಯೆ (300 ರಿಂದ 900ರ ನಡುವೆ), ಇದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ (NBFC) ನಿಮ್ಮ ಹಣಕಾಸು ನಂಬಿಕೆಯನ್ನು ತೋರಿಸುತ್ತದೆ.
700ಕ್ಕಿಂತ ಮೇಲಿರುವ ಸ್ಕೋರ್ ಅನ್ನು ಉತ್ತಮ ಎನ್ನಲಾಗುತ್ತದೆ. ಸ್ಕೋರ್ ಉತ್ತಮವಾಗಿದ್ದರೆ:

  • ಲೋನ್ ಅನುಮೋದನೆ ಶೀಘ್ರ
  • ಬಡ್ಡಿದರ ಕಡಿಮೆ
  • ಹೆಚ್ಚು ಮೊತ್ತದ ಲೋನ್ ಸಿಗುವ ಸಾಧ್ಯತೆ

ಇದನ್ನು ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ! ಮತ್ತೊಂದು ನವಶಕ್ತಿ ಸ್ಕೀಮ್; ಏನಿದು ಹೊಸ ಯೋಜನೆ?

ಸ್ಕೋರ್ ಇಂಪ್ರೂವ್ ಮಾಡುವ ಸರಳ ಮಾರ್ಗಗಳು:

  1. EMI ಮತ್ತು ಬಿಲ್‌ಗಳನ್ನು ಸಮಯಕ್ಕೆ ಪಾವತಿ ಮಾಡಿ – ಆಟೋ ಡೆಬಿಟ್ ಸೆಟ್‌ಮಾಡಿದರೆ ನಿಮ್ಮಿಂದ ತಪ್ಪು ಆಗದಿರುತ್ತದೆ.
  2. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಶಿಸ್ತಿರಿ – ಲಿಮಿಟ್‌ನ 30% ಒಳಗೆ ಬಳಸಿ.
  3. ವರ್ಷಕ್ಕೊಮ್ಮೆ ಉಚಿತ ಕ್ರೆಡಿಟ್ ವರದಿ ಪಡೆದುಕೊಳ್ಳಿ – CIBIL, Experian, Equifax ಅಥವಾ CRIF Highmark ತಾಣಗಳಿಂದ ಡೌನ್‌ಲೋಡ್ ಮಾಡಬಹುದು.
  4. ತಪ್ಪು ದಾಖಲೆಗಳಿದೆಯಾ ಪರೀಕ್ಷಿಸಿ – ನೀವು ತೆಗೆದುಕೊಂಡಿಲ್ಲದ ಸಾಲ ಅಥವಾ ದೋಷಗಳು ಕಂಡುಬಂದರೆ ತಕ್ಷಣ ದೂರು ನೀಡಿ. ಸುಮಾರು 30 ದಿನಗಳಲ್ಲಿ ಸರಿಯಾಗುತ್ತದೆ.

ಎಷ್ಟು ಸಮಯದಲ್ಲಿ ಫಲಿತಾಂಶ ದೊರೆಯಬಹುದು?

ಈ ಕ್ರಮಗಳನ್ನು ಸರಿಯಾಗಿ ಅನುಸರಿಸಿದರೆ 3 ರಿಂದ 6 ತಿಂಗಳಲ್ಲಿ Verification ಸ್ಪಷ್ಟ ಸುಧಾರಣೆ ಕಾಣಬಹುದು.

ಇದನ್ನು ಓದಿ: POST OFFICE SCHEME: ಗಂಡ ಹೆಂಡತಿಯರಿಗೆ ಗುಡ್ ನ್ಯೂಸ್! ಪ್ರತಿ ತಿಂಗಳು 9000 ಸಿಗಲಿದೆ

ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಅದು ಶಾಶ್ವತ ಸಮಸ್ಯೆಯಲ್ಲ. ಸರಿಯಾದ ಕ್ರಮದಿಂದಲೇ ನೀವು ಉತ್ತಮ ಬಡ್ಡಿದರದಲ್ಲಿ ಲೋನ್ ಪಡೆಯಲು ಅರ್ಹರಾಗಬಹುದು.

Leave a Comment