ಆಸ್ತಿ ನೋಂದಣಿ ಕಾನೂನಿನಲ್ಲಿ ನೂತನ ತಿದ್ದುಪಡಿ: GPA ಆಧಾರಿತ ವ್ಯವಹಾರಕ್ಕೆ ನೋಂದಣಿ ಕಡ್ಡಾಯ
ಈಗಿನಿಂದ ಜಿಪಿಎ (General Power of Attorney – GPA) ಆಧಾರಿತ ಆಸ್ತಿ ಮಾರಾಟ ಅಥವಾ ವರ್ಗಾವಣೆಗೆ ನೇರವಾಗಿ ನೋಂದಣಿ ಕಡ್ಡಾಯವಾಗಿದೆ. ಇನ್ನು ಹೆಚ್ಚಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು, ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ ಸರ್ಕಾರ ನೂತನ ತಿದ್ದುಪಡಿ ಕಾನೂನು ಜಾರಿಗೆ ತಂದಿದ್ದು, GPA ಆಧಾರದಲ್ಲಿ ನಡೆಸಲಾಗುವ ಯಾವುದೇ ಆಸ್ತಿ ವ್ಯವಹಾರವೂ ಈಗಿನಿಂದ ಸರಕಾರಿ ದಾಖಲೆ ಮೂಲಕಲೇ ನಡೆಯಬೇಕು.
ಈ ನವ ಕಾನೂನಿನ ಮೂಲಕ ಇ–ಸ್ಟಾಂಪ್ ಮತ್ತು ಡಿಜಿಟಲ್ ಸಹಿ ಪದ್ಧತಿಯನ್ನು ಕಡ್ಡಾಯಗೊಳಿಸಲಾಗಿದ್ದು, ಅಸಲಿ ದಾಖಲೆಗಳಿಲ್ಲದೆ ನೋಂದಣಿಗೆ ಅವಕಾಶ ಇಲ್ಲ. ರಾಜ್ಯಪಾಲ ಹಾಗೂ ರಾಷ್ಟ್ರಪತಿಯ ಅನುಮೋದನೆಯ ನಂತರ ಈ ಕಾನೂನು ಕರ್ನಾಟಕ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಇನ್ನು ಮುಂದೆ ಎಲ್ಲಾ ದಾಖಲೆಗಳಲ್ಲಿ ಡಿಜಿಟಲ್ ಸಹಿಗೆ ಆಧಾರ್ ಲಿಂಕ್, ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಿದ್ದು, ಇದು ನಕಲಿ ಸಹಿ ಹಾಗೂ ದಾಖಲೆ ದುರ್ಬಳಕೆಗೆ ತಡೆ ಒಡ್ಡಲಿದೆ.
ಇದನ್ನು ಓದಿ: ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ಸಿಹಿ ಸುದ್ದಿ!
ಈ ನಿಯಮಗಳು ಕೇವಲ ಖಾಸಗಿ ಆಸ್ತಿಗೆ ಮಾತ್ರವಲ್ಲದೆ, ಸರ್ಕಾರದಿಂದ ಕೊಡುವ ನಿವೇಶನಗಳು ಹಾಗೂ ಗೃಹ ನಿರ್ಮಾಣ ಮಂಡಳಿಯ ಯೋಜನೆಗಳಿಗೂ ಅನ್ವಯವಾಗುತ್ತವೆ.
ಈ ತಿದ್ದುಪಡಿಯು ಭೂ ಹಗರಣ ಹಾಗೂ ಆಸ್ತಿ ವಂಚನೆ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಮಹತ್ತ್ವದ ಹೆಜ್ಜೆಯಾಗಿದೆ. ಸಾರ್ವಜನಿಕರ ಹಕ್ಕು ರಕ್ಷಣೆಯ ಉದ್ದೇಶದಿಂದಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.





